ವಿಕ್ರಮಾದಿತ್ಯ 5

 	ಕಲ್ಯಾಣ ಚಾಳುಕ್ಯವಂಶದ ಅರಸ (1008-15). ಇ¾Âವಬೆಡಂಗ ಸತ್ಯಾಶ್ರಯನ (997-1008) ಸೋದರನಾದ ದಶವರ್ಮ ಈತನ ತಂದೆ. ತಾಯಿ ಭಾಗ್ಯವತಿ. ದೊಡ್ಡಪ್ಪನ ಆಳಿಕೆಯ ಕೊನೆಯ ದಿನಗಳಲ್ಲಿ ಆಡಳಿತದಲ್ಲಿ ಸಮಭಾಗಿಯಾಗಿದ್ದ ಈತ 1008ರಲ್ಲಿ ಪಟ್ಟಕ್ಕೆ ಬಂದ. ಪಟ್ಟಕ್ಕೆ ಬಂದ ಅನಂತರ ಇವನ ರಾಜ್ಯದ ಮೇಲೆ ದಕ್ಷಿಣದ ಚೋಳರೂ ಉತ್ತರದ ಪರಮಾರ ಅರಸ ಭೋಜನೂ ಆಕ್ರಮಣ ನಡೆಸಿದರು. ರಾಜವಲ್ಲಭನ ಭೋಜಚರಿತ್ರದಲ್ಲಿ ನಿರೂಪಿಸಲಾದ ಘಟನೆ ಯೊಂದನ್ನಾಧರಿಸಿ ಪರಮಾರ ಭೋಜ ಚಾಳುಕ್ಯರ ವಿರುದ್ಧ ದಂಡೆತ್ತಿ, ವಿಕ್ರಮಾದಿತ್ಯನನ್ನು ಕೊಂದು, ತನ್ನ ಪೂರ್ವಜರ ಸೇಡು ತೀರಿಸಿಕೊಂಡ ನೆಂಬ ಒಂದು ಅಭಿಪ್ರಾಯವಿದೆ. ಆದರೆ ಇದು ಸಾಧಾರವಲ್ಲವೆಂದು ತೋರಿಸಲಾಗಿದೆ. ದೊಡ್ಡಪ್ಪನಿಂದ ಪಡೆದ ರಾಜ್ಯವನ್ನು ಕುಂದುಂಟಾಗದಂತೆ ಕಾಪಾಡಿಕೊಂಡು ಬಂದ ಯಶಸ್ಸು ಈತನದು. ಆಳಿಕೆಯ ಅಂತಿಮ ವರ್ಷಗಳಲ್ಲಿ ಕಿರಿಯ ಸೋದರ ಈತನೊಡನೆ ರಾಜ್ಯವಾಳಿದ.     
	(ಜಿ.ಬಿ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ